ಹಾಡಿನ ಮೂಲಕ ಹೃದಯ ಗೆದ್ದ ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ: ವೀಕ್ಷಿಸಿ

ಸೇನಾ ವಸ್ತ್ರದಲ್ಲಿರುವ ಧೋನಿ ಇದೀಗ ಬಾಲಿವುಡ್ ಚಿತ್ರದ ಪ್ರಸಿದ್ಧ ಗೀತೆಯನ್ನು ಹಾಡುವ ಮೂಲಕ ಸಹಸ್ರಾರು ಅಭಿಮಾನಿಗಳ ಹೃದಯ ಗೆದಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
ನವದೆಹಲಿ: ಕಣಿವೆ  ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಸೇನಾ ಕರ್ತವ್ಯದಲ್ಲಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಸೇನಾ ಬೆಟಾಲಿಯನ್ ಜೊತೆಗೆ ವಾಲಿಬಾಲ್ ಆಡುವುದು ಹಾಗೂ ಶೂಗಳನ್ನು ಪಾಲಿಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ  ಬೆನ್ನಲ್ಲೇ ಸೇನಾ ವಸ್ತ್ರದಲ್ಲಿರುವ ಧೋನಿ ಇದೀಗ ಬಾಲಿವುಡ್ ಚಿತ್ರದ ಪ್ರಸಿದ್ಧ ಗೀತೆಯನ್ನು ಹಾಡುವ ಮೂಲಕ ಸಹಸ್ರಾರು ಅಭಿಮಾನಿಗಳ ಹೃದಯ ಗೆದಿದ್ದಾರೆ.  'ಕಬೀ ಕಬೀ' ಚಿತ್ರದ ಮೈನ್ ಪಾಲ್ ದೊ ಪಾಲ್ ಕಾ ಶಯರ್ ಹನ್  ಗೀತೆಯನ್ನು ಹಾಡಿ ಮೋಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com